ನವ ದಂಪತಿಗಳಿಗೆ ಶುಭ ಆಶೀರ್ವಾದ!!!

ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ,
ಸದ್ಯ ಉಡುಪಿಯ ಡಾ. ಟಿ.ಎಂ.ಎ. ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ
ಶ್ರೀಯುತ ನಾಣಯ್ಯ ಡಿ.ಸಿ. ಮತ್ತು ಅವರ ಧರ್ಮಪತ್ನಿ
ಶ್ರೀಮತಿ ಹೇಮಲತ (ಹೇಮಕ್ಕ) ಇವರ  ಸುಪುತ್ರಿ
ಡಾ. ಲಿಖಿತ ಹಾಗೂ ಚಿ. ಭರತ್ ಪ್ರಸಾದರ ವಿವಾಹ, 
೩ ಮೇ ೨೦೦೯, ರವಿವಾರದಂದು ಉಡುಪಿ ಅಲೆವೂರಿನಲ್ಲಿ ನೆರವೇರಿತು.
ನವ ವಧೂವರರಿಗೆ ನನ್ನ ಶುಭ ಆಶೀರ್ವಾದಗಳು.

 

asu016

ನಿನ್ನ ಬಾಲ್ಯದ ನೆನಪು ನನಗೆ ನಿನ್ನೆ ಮೊನ್ನೆಯ ಮಾತು
ನೀನು ವಧುವಾಗಿರುವೆಯೆಂದರೆ ನಂಬಲಾಗದ ಮಾತು
 
ಆದರೂ ನನ್ನ ಕಣ್ಮುಂದೆ ಸಿಂಗರಿಸಿ ನಿಂತ ಸೌಂದರ್ಯ
ಕಂಡು  ನಿಜಕ್ಕೂ ಬೆರಗಾಗಿ ನಾನು ಪಡುತ್ತಿದ್ದೆ ಆಶ್ಚರ್ಯ
 
ಕಳೆದ ದಿನಗಳ ಗಣನೆ ನಮಗೆ ಎಂದಿಗೂ ಸಿಗುವುದಿಲ್ಲ
ಮಕ್ಕಳು ಬೆಳೆದು ನಿಂತರಿವು ನಮಗೆ ಆಗುವುದೇ ಇಲ್ಲ
 
ಅಂದು ಸೇತುಬಂಧಕೆ ಶ್ರೀರಾಮ ತಯಾರಿ ನಡೆಸಿದಂತೆ
ಸಂಬಂಧಗಳ ನಡುವಣ ಸೇತುವೆಗೆ ಈ ತಯಾರಿಯಂತೆ
 
ಅಂದು ಸಹಕರಿಸಿತು ವಾನರ ಸೈನ್ಯ ರಾಮ ಲಕ್ಷ್ಮಣರಿಗೆ
ಹರಸಿದವಿಂದು ಸಾವಿರಾರು ಹೃದಯಗಳು ಇಲ್ಲಿ ನಿಮಗೆ
 
ಗುರು ಹಿರಿಯರ ಎಂದೆಂದೂ ಗೌರವಿಸಿ ಬಾಳಿದರೆ ನೀವು
ನಿಮ್ಮ ಬಾಳಲ್ಲಿ ಬಾರದೆಂದಿಗೂ ಸಹಿಸಲಾಗದ ನೋವು
 
ಒಲವಿರಲಿ, ನಲಿವಿರಲಿ, ಬಾಳು ನಿಮ್ಮಿಷ್ಟದಂತೆ ಇರಲಿ
ನಿಮ್ಮೀ ದಾಂಪತ್ಯ ಜೀವನದ ದಿನಗಳವು ಲಕ್ಷದಷ್ಟಿರಲಿ

8 Responses to ನವ ದಂಪತಿಗಳಿಗೆ ಶುಭ ಆಶೀರ್ವಾದ!!!

 1. ksraghavendranavada ಹೇಳುತ್ತಾರೆ:

  ಗುರು ಹಿರಿಯರ ಎಂದೆಂದೂ ಗೌರವಿಸಿ ಬಾಳಿದರೆ ನೀವು
  ನಿಮ್ಮ ಬಾಳಲ್ಲಿ ಬಾರದೆಂದಿಗೂ ಸಹಿಸಲಾಗದ ನೋವು

  ಒಲವಿರಲಿ, ನಲಿವಿರಲಿ, ಬಾಳು ನಿಮ್ಮಿಷ್ಟದಂತೆ ಇರಲಿ
  ನಿಮ್ಮೀ ದಾಂಪತ್ಯ ಜೀವನದ ದಿನಗಳವು ಲಕ್ಷದಷ್ಟಿರಲಿ
  ಸು೦ದರ ಸ೦ದೇಶಯುಕ್ತ ಸಾಲುಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. Athradi ಹೇಳುತ್ತಾರೆ:

  ಇಲ್ಲಿಗೊಂದು ಮಿಂಚಂಚೆ ಕಳಿಸಿ.
  asuhegde@gmail.com

 3. Venkatesh ಹೇಳುತ್ತಾರೆ:

  Hegdeyavare namaskara,

  Nannuru Athradi, hottepaadu manipaladalli, dinakomme internet nalli Oladutiruttene. wordpress na bahuteka bloggalannu suttaadiddene. athyantha thattaneyagi nivu bareyuva shaili nanage tumba hidisiruttade, magala pariksha phalitamtamsha, kattalaada mele parastree bheti ithyadi.. munduvarisutta iri.. shubhavaagali..

 4. Athradi ಹೇಳುತ್ತಾರೆ:

  ಧನ್ಯವಾದಗಳು, ವೆಂಕಟೇಶ್.
  ಪರಿಚಯ ಸಿಗಬಹುದೇ?

 5. Venkatesh Athradi ಹೇಳುತ್ತಾರೆ:

  Hegde yavare, arthapurnavagi haraisida nimma kavanada shaili tumba mechhuge agide.

 6. Nanaiah ಹೇಳುತ್ತಾರೆ:

  Nanna Sanmithrare
  Nimma web sitenalli Namma magalu+Aliya ra photo mathu sundaravaada kavana Odhi aanandiside. Thank u very much. Shubhavagali

 7. HEMA ಹೇಳುತ್ತಾರೆ:

  nimma aashirvadavu namage sadavirali.nimage thumbu hradayada krathjnathegalu.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: