ನನ್ನ ಮೂರ್ಖನನ್ನಾಗಿಸಬೇಡಿ!!!

01 ಏಪ್ರಿಲ್ 09
ಮೂರ್ಖರ ದಿನದಂದು ನನ್ನ
ಮತ್ತೆ ಮೂರ್ಖನನ್ನಾಗಿಸಬೇಡಿ
 
ನಿಮ್ಮ ಸಮಯ ನಿಮ್ಮ ಶಕ್ತಿಯ
ಹೀಗೆ ವ್ಯರ್ಥಗೊಳಿಸಲೇ ಬೇಡಿ
 
ಮೂರ್ಖನೇ ಹಿಂದಿನಿಂದಲೂ
ನಿಜ ಇಂದು ಉಳಿದಿಲ್ಲ ಬಾಕಿ
 
ಮೂರ್ಖನಾಗುತ್ತ ಬಂದಿದ್ದೇನೆ
ನಾಯಕರುಗಳಿಗೆ ಮತ ಹಾಕಿ
 
ನಮ್ಮ ತಲೆಗೆ ಹೊಸ ಹೊಸ
ಟೋಪಿ ಪ್ರತೀ ಚುನಾವಣೆಯಲ್ಲೂ
 
ನಮ್ಮದೇ ಪ್ರತೀಬಾರಿ ಸೋಲು
ನಮ್ಮ ನಾಯಕರ ಗೆಲುವಿನಲ್ಲೂ
 
ಮತ್ತೆ ಬಂದಿದ್ದಾರೆ ನಮ್ಮ ಮತ
ಯಾಚನೆಗೆ ಮೂರ್ಖರ ಮಾಸದಲ್ಲಿ
 
ನಮ್ಮೆಲ್ಲರ ಮೂರ್ಖರನ್ನಾಗಿಸಲು
ಮುಖದಲ್ಲಿ ಮಂದಹಾಸ ಚೆಲ್ಲಿ
 
ಒದ್ದು ಓಡಿಸಬೇಕು ದೂರ ಎಂದು 
ನನ್ನ ಮನದೊಳಗಿದೆ ಹಂಬಲ
 
ಯಾರಲ್ಲಿ ಹೇಳಲಿ ಯಾರು ಬಂದು
ನೀಡುವರು ನನಗೆ ಇಲ್ಲಿ ಬೆಂಬಲ
 
ಚುನಾವಣೆಗೇ ಹಾಕಬಾರದೇಕೆ
ನಾವೆಲ್ಲಾ ಈ ಬಾರಿ ಬಹಿಷ್ಕಾರ
 
ಎಂಬ ಕರೆ ನೀಡಿದರೆ ನನಗೆ ಸಜೆ
ಯಾಕೆಂದರದು ಸಂವಿಧಾನ ಬಾಹಿರ