ಕಡಿಮೆಯಾಗದಿರಲಿ!!!

ಸಖೀ,
ನೀನು
ನನ್ನವಳಾಗದಿದ್ದರೂ
ಚಿಂತೆಯಿಲ್ಲ,
ಆದರೆ,
ನನ್ನೊಳಗೆ ನಿನ್ನ ಪ್ರೀತಿ
ಸದಾ ಇರುವಂತೆ,
ನಿನ್ನೊಳಗೆ ನನ್ನ
ಪ್ರೀತಿಯೂ ಇರಲಿ;
ನನ್ನ ನಿನ್ನ ನಡುವಣ
ಮಾತುಗಳು
ಕಡಿಮೆಯಾದರೂ
ಚಿಂತೆಯಿಲ್ಲ,
ಆದರೆ,
ನಮ್ಮ ನಡುವಣ
ಈ ಮೌನ ಸಂಭಾಷಣೆ
ಕಡಿಮೆಯಾಗದಿರಲಿ;
ನಿನ್ನ ಕಣ್ಣುಗಳು
ನನ್ನ್ನ ಕಾಣದಿದ್ದರೂ
ಚಿಂತೆಯಿಲ್ಲ,
ಆದರೆ,
ನನ್ನ ಬಿಂಬವನೇ
ತುಂಬಿಕೊಂಡಿರುವ
ಆ ಕಣ್ಣುಗಳ ಕಾಂತಿ
ಕಡಿಮೆಯಾಗದಿರಲಿ;
ನನ್ನ ಮಾತುಗಳು ನಿನಗೆ
ಕೇಳಿ ಬರದಿದ್ದರೂ
ಚಿಂತೆಯಿಲ್ಲ,
ಆದರೆ ಆ ನಿನ್ನ ಕಿವಿಗಳು,
ನನ್ನ ಮಾತಿಗಾಗಿ
ಕಾಯುವುದನು
ಕಡಿಮೆ ಮಾಡದಿರಲಿ;
ಸಖೀ,
ಈ ಜೀವನವಿಡೀ
ಒಬ್ಬರಿಂದೊಬ್ಬರು
ದೂರವಾಗಿದ್ದರೂ
ಚಿಂತೆಯಿಲ್ಲ,
ಆದರೆ,
ಮುಂದಿನ ಜನುಮದ
ನಿರೀಕ್ಷೆ ಮಾತ್ರ ನಮ್ಮಲ್ಲಿ
ಕಡಿಮೆಯಾಗದಿರಲಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: