ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ?

ರಸ್ತೆಗಿಳಿದಿದೆ ನೋಡಿ ಟಾಟಾದವರ
ಹೊಸ ಚಿಕ್ಕ ಕಾರು ನಾನೋ
ಕಾರೊಳಗೆ ಕೂತ್ಕೊಳ್ಳೋದು ಯಾರು
ನೀನೋ ನಾನೋ?

ಲಕ್ಷದ ಕಾರು ಬಂದಾಗಿದೆ ಈಗ ಎಲ್ಲರ
ಲಕ್ಷ್ಯವೂ ಇತ್ತಕಡೆ
ಬೇರೆ ಕಾರುಗಳ ಬೆಲೆ ಇಳಿದರೆ ನಾವು
ವಾಲಬಹುದು ನೋಡಿ, ಅತ್ತಕಡೆ.

ಕಾರಿನ ಬೆಲೆ ಇಳಿಸಿ ಜಗತ್ತನ್ನೇ ಬೆರಗು
ಗೊಳಿಸಿದರಿಂದು ಟಾಟಾ
ಭ್ರಷ್ಟಾಚಾರದಿಂದಾಗಿ ನೇತಾರರು ಇಡೀ
ದೇಶಕ್ಕೆ ಕೊಡುತಿಹರು ಕಾಟ

ಹೇಳಿದ್ದನ್ನು ಸಾಧಿಸಿ ತೋರಿಸುವುದು
ಅದೇಕೋ ಉದ್ಯಮಿಗಷ್ಟೇ ಆಗಿದೆ ಸಾಧ್ಯ
ರಾಜಕೀಯದ ಧುರೀಣರಿಗೆ ತಮ್ಮ ಮಾತ
ಉಳಿಸಿಕೊಳ್ಳಲು ಯಾಕಾಗುತಿದೆ ಅಸಾಧ್ಯ

ಕಾರು ಬರಬಹುದು ನಮ್ಮ ನಿಮ್ಮ ಎಲ್ಲರ
ಮನೆಯಲ್ಲೂ ಮಂದಿಗೆ ಒಂದರಂತೆ
ಆದರೆ ಸುಂದರ ರಸ್ತೆಗಳಿರಬಹುದೇ ನಾವು
ಆ ಕಾರುಗಳಲಿ ಸವಾರಿ ಮಾಡುವಂತೆ

ಟಾಟಾ ಅಂಬಾನಿ ಮೂರ್ತಿಗಳನು ದೇಶದ
ಗದ್ದುಗೆಯಲಿ ಕೂರಿಸಿ ನೋಡಬಾರದೇಕೆ
ಅವರ ಮುಂದಾಳುತನದಲಿ ಈ ದೇಶದ
ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ

One Response to ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ?

  1. ಹರಿಪ್ರಸಾದ್ ಹೇಳುತ್ತಾರೆ:

    ಆಸು ಅವರೆ, ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಸಮಯೋಚಿತ ಕವನ. ನೀವು ಸರಿಯಾಗಿ ಹೇಳಿದ್ದೀರಿ. ಉದ್ಯಮಿಗಳಿಗಿರುವ ಸಾಧಿಸುವ ಛಲ ನಮ್ಮ ರಾಜಕೀಯ ಧುರೀಣರಿಗೇಕೋ ಇಲ್ಲಾ. ಆದರೆ ಉದ್ಯಮಿಗಳನ್ನು ಗದ್ದುಗೆಯಲ್ಲಿ ಕೂರಿಸಿದರೆ ಆಗುವ ಪರಿಣಾಮದ ಬಗ್ಗೆ ನನಗೆ ಸ್ವಲ್ಪ ಅನುಮಾನ. ಏಕೆಂದರೆ, ಈಗಾಗಲೇ ದೇಶಸೇವೆ ಮಡುವವರೇ ಎಲ್ಲವನ್ನೂ ವ್ಯಾಪಾರಮಯವನ್ನಾಗಿ ಮಾಡಿದ್ದಾರೆ. ಇನ್ನು ಉದ್ಯಮಿಗಳು ಇನ್ನೇನು ಮಾಡುವರೋ ನಾಕಾಣೆ. ಆದರೆ ಒಮ್ಮೆ ಅವರಿಗೂ ಅವಕಾಶ ಕೊಟ್ಟು ನೋಡಬಹುದು..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: