ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

ಸಮಾನರೆಲ್ಲ ಮನುಜರಿಲ್ಲಿ
ಮಹಿಳೆಯರೇ ನಿಮ್ಮನ್ನು
ನೀವೇ ಹಳಿಯದಿರಿ
 
ಸಮಾನತೆಯ ಕೋರೀ ಕೋರೀ
ಸಮಾನರಲ್ಲ ಎಂದು ನೀವೇ
ಜಗಕೆ ಸಾರದಿರಿ
 
ಸಮಾನತೆಯ ಬೇಡಿಕೆಯಲ್ಲೇ
ಸಮಾನರಲ್ಲ ಎಂಬುದಕೆ
ಸಮ್ಮತಿ ಇಹುದಲ್ಲವೇ
 
ಎಲ್ಲ ಒಂದೇ ಎನುವ ಭಾವ
ಇರಲು ಈ ಬೇಡಿಕೆಗಳ ನೀವು
ಮರೆಯಬಹುದಲ್ಲವೇ
 
ಎಲ್ಲ ರಂಗಗಳಲೂ ನಿಮಗೆ
ಮುಕ್ತ ಅವಕಾಶ ಇರಲು
ಸಾಧಸಿಯೇ ತೋರಿಸಿರಿ
 
ಪ್ರಸಿದ್ಧರಾದ ಮಹಿಳೆಯರೆಲ್ಲ
ಯಾವ ಮೀಸಲಾತಿಗೆ ಮೊರೆ
ಹೊಕ್ಕಿದ್ದರೆಂದು ಹೇಳಿರಿ
 
ಮಹಿಳೆ ಈಗ ರಾಷ್ಟ್ರಾಧ್ಯಕ್ಷೆ
ಮಹಿಳೆಯ ಆದೇಶದಂತೆ
ನಡೆಯುತಿದೆ ಸರಕಾರ
 
ಸಾಧನೆಗೈವವರಿಗೆ ಸದಾ
ಇಹುದು ಅವಕಾಶಗಳು
ಏಕೆ ಈ ಹಾಹಾಕಾರ
 
ಹೆಣ್ಣು ಮಗುವು ಜನಿಸಿದಾಗ
ಹೆಚ್ಚು ಮರುಗುವವಳು
ತಾನೂ ಒಬ್ಬ ಹೆಣ್ಣು
 
ಆ ಕೆಟ್ಟ ಯೋಚನೆಯೇ
ಮನದಿಂದ ತೊಲಗಿದರೆ
ಸಾಯಬೇಕಿಲ್ಲ ಹೆಣ್ಣು
 
ಹೆಣ್ಣೇ ಹೆಣ್ಣ ಮೆಟ್ಟಿ ನಿಂತು
ನಡೆಸಿಹಳು ಜಗದಲೆಲ್ಲ 
ಸಾಕಷ್ಟು ದುರಾಚಾರ
 
ಹೆಣ್ಣು ಹೆಣ್ಣ ಜಯಿಸಿದರೆ
ಈ ಜಗದಿ ಇರಲಾರದು
ಇನ್ನು ಈ ಅನಾಚಾರ

4 Responses to ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

 1. ಹರಿಪ್ರಸಾದ್ ಹೇಳುತ್ತಾರೆ:

  ತುಂಬಾ ಸತ್ಯ.. ಚೆನ್ನಾಗಿ ಮೂಡಿ ಬಂದಿದೆ. ಇದು ಬರಿಯ ಹೆಣ್ಣಿಗೆ ಯಾಕೆ, ಇಡೀ ಜಾತಿ ಮೀಸಲಾತಿಗೂ ಅನ್ವಯವಾಗುವಂಥದು. ಭಾರತವನ್ನು ಜಾತ್ಯಾತೀತ ಮಾಡಲು ಹೊರಟಿರುವವರೇ ಮೀಸಲಾತಿಯ ಮೂಲಕ ಜಾತಿಗಳನ್ನು ಹುಟ್ಟು ಹಾಕುತ್ತಿದ್ದಾರೆ ಹಾಗೂ ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದ್ದಾರೆ.

 2. ಪ್ರದೀಪ್ ಹೇಳುತ್ತಾರೆ:

  ನೂರಕ್ಕೆ ನೂರು ಸತ್ಯ ಮಾತುಗಳು ಸಾರ್…
  “ಸಮಾನತೆಯ ಕೋರೀ ಕೋರೀ
  ಸಮಾನರಲ್ಲ ಎಂದು ನೀವೇ
  ಜಗಕೆ ಸಾರದಿರಿ..”

 3. Suresh ಹೇಳುತ್ತಾರೆ:

  ನಿಮ್ಮಲ್ಲಿ ಭಾವನೆಗಳನ್ನು ಮೂಡಿಸಲು ವಿಫಲವಾಗಿ ಕವಿ ಸೋತಿದ್ದಾನೆ ಅನ್ನಬಹುದಾದರೂ, ನಿಮಗೆ ಪಾಠ ಓದಿದ ಹಾಗೆ ಆಗಿದೆ ಅನ್ನುವುದೇ ಈ ಕವನದ ಸಾರ್ಥಕತೆ ಅಲ್ಲವೇ, ರಾಘವೇಂದ್ರ ಹೆಗ್ಡೆಯವರೇ?
  ನನ್ನ ಮನದ ಮಾತುಗಳು ಅಕ್ಷರಗಳ ರೂಪ ತಳೆದಾಗ ಆಸುಮನದಲ್ಲಿ ಪ್ರತ್ಯಕ್ಷವಾಗುತ್ತವೆ, ಅಷ್ಟೆ. ಅವು ಓದುಗರ ಮನದಲ್ಲೂ ಭಾವನೆಗಳನ್ನು ಮೂಡಿಸಲು ಯಶಸ್ವಿಯಾದರೆ ಸಂತಸ, ಹಾಗಾಗಿಲ್ಲವಾದರೆ ಬೇಸರವಂತೂ ಇಲ್ಲ.
  ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

 4. raghavendra hegde ಹೇಳುತ್ತಾರೆ:

  kavana oodidaga aguva feeling moodisalu e kavana vipalavagide ennabahudhu.yavudo kannada pata odida hagayitu

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: