ಮದ್ದಲೆ ನುಡಿಸಿ ಕಾರ್ಯಕ್ರಮದ ಉದ್ಘಾಟನೆ!

17 ಫೆಬ್ರ 09

parkala012

ಈ ತಿಂಗಳ ೮ ರಂದು ಉಡುಪಿ ಜಿಲ್ಲೆಯ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯವರು ಹಮ್ಮಿಕೊಂಡಿದ್ದ ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮ “ಕನ್ನಡ ಡಿಂಡಿಮ” ದ ಉದ್ಘಾಟನೆಯನ್ನು ಮದ್ದಲೆಯ ಮಾಂತ್ರಿಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಹಿರಿಯಡಕ ಗೋಪಾಲ ರಾವ್ ಅವರು ಮದ್ದಲೆ ನುಡಿಸುವ ಮೂಲಕ ವಿಭಿನ್ನವಾಗಿ ನೆರವೇರಿಸಿದರು.

೯೩ ವರುಷದ ಯುವಕ ಶ್ರೀ ಹಿರಿಯಡಕ ಗೋಪಾಲ ರಾವ್ ಮದ್ದಳೆ ನುಡಿಸಿದಾಗ ಅವರಿಗೆ  ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ ಪೋಷಕರು ಹಾಗೂ ಉಡುಪಿಯ ನ್ಯಾಯವಾದಿ (ನನ್ನ ಅನುಜ) ಶ್ರೀ ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಪ್ರಾರ್ಥನೆ ಹಾಡಿ (ಯಕ್ಷಗಾನದ ಪ್ರಾರ್ಥನೆ) ಜೊತೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಅಂಬಾತನಯ ಮುದ್ರಾಡಿಯವರು ವಹಿಸಿದ್ದರು.


ವಿಶೇಷ ಅತಿಥಿಗಳಾಗಿ ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ (ಗಿರಿವಾಸಿನಿ ಆತ್ರಾಡಿ) ಹಾಗೂ ಹಿರಿಯಡಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಂಶೋಧಕ ಶ್ರೀ ಪಾದೆಕಲ್ಲು ವಿಷ್ಣು ಭಟ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷ ಶ್ರೀ ರವೀಂದ್ರ ನಾಯಕ್ ಅವರ್ ನೇತ್ರತ್ವದಲ್ಲಿ ಇಡೀ ದಿನ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದವು.


ಸೂರ್ಯನಿಗೆ ಚಂದ್ರನ ದೂರು!

16 ಫೆಬ್ರ 09
ಸೂರ್ಯ ಸೇರಿಕೊಂಡ ಮೇಲೆ ತನ್ನ ಊರು
ಚಂದ್ರ ಸಲ್ಲಿಸುತ್ತಾನೆ ನೋಡಿ ಈ ದೂರು
 
ನೀನು ನಿನ್ನ ಜವಾಬ್ದಾರಿಯ ನನಗೆ
ವಹಿಸಿ ನಿನ್ನ ಪಯಣ ಬೆಳೆಸಿದೆ 
 
ಗೊತ್ತಿಲ್ಲ ನಿನಗೆ ನಾನಿನ್ನು ಒಬ್ಬನೇ
ಇಲ್ಲೆಷ್ಟು ವೇದನೆ ಸಹಿಸಬೇಕಾಗಿದೆ
 
ನೀನು ಮರೆಯಾದರೆ ಸಾಕು ನನ್ನನ್ನು 
ಮುತ್ತಿಕೊಳ್ಳುತ್ತವೆ ತಾರೆಗಳ ದಂಡು
 
ನಾನು ನಿನ್ನ ಹಂಗಿನಲ್ಲಿದ್ದೇನೆಂದು
ಹೀಗಳೆಯುತ್ತವೆ ನನ್ನನ್ನು ಕಂಡು 
 
ಅವರಿಗೆಲ್ಲಾ ಸ್ವಂತದ ಬೆಳಕಿದೆ
ಎಂಬುದಕೆ ಇದ್ದರೇನಂತೆ ಹೆಮ್ಮೆ
 
ನನ್ನ ನಿನ್ನಂತೆ ಭೂಮಿಯ ಬೆಳಗಿ
ಅವರೆಲ್ಲಾ ತೋರಿಸಲಂತೆ  ಒಮ್ಮೆ”

ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!

16 ಫೆಬ್ರ 09
ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ
ನೀಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ
 
ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ
ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂಗಳನ್ನೆಣಿಸುತ್ತಿದ್ದಿರಿ
 
ಸಂಸ್ಕೃತಿ ಸಂಸ್ಕೃತಿ ಎಂದು ಹೀಗೆ ಸುಮ್ಮನೇ ಬಡಬಡಿಸದಿರಿ
ಸಾಧ್ಯವಿದ್ದರೆ ನಮ್ಮ ನಾಡಿನ ಕೃಷಿ ಸಂಸ್ಕೃತಿಯನ್ನು ಉಳಿಸಿರಿ
 
ಎಲ್ಲಾ ಕಲ್ಚರಿಗೂ ಮುಖ್ಯ ನಮ್ಮ ನಾಡಿನ ಅಗ್ರಿಕಲ್ಚರ್ ಕೇಳಿ
ನಿಮ್ಮಿಂದ ಅದನ್ನುಳಿಸಲು ಸಾಧ್ಯವಿದೆಯಾ ಯೋಚಿಸಿ ಹೇಳಿ
 
ನಾಡಿನ ಜನತೆಯನು ಒಂದಾಗಿಸುವ ಅಭಿಯಾನ ಮಾಡಿ
ಆಗ ನಿಮ್ಮೊಂದಿಗೆ ಇಡೀ ಸಮಾಜವೇ ಬರುವುದು ನೋಡಿ
 
ಸಮಾಜವನು ಒಡೆಯುವುದಕೆ ರಾಜಕಾರಣಿಗಳು ಸಾಕು
ಅವರು ಮಾಡುವ ಕೆಲಸಕ್ಕೆ ನಿಮ್ಮ ಸಹಕಾರ ಏಕೆ ಬೇಕು
 
ಮುಂಬರುವ ಹೋಳಿಯ ಬಣ್ಣಕ್ಕೆ ತಣ್ಣೀರೆರಚದಿರಿ ಇನ್ನು
ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು

ಹುಂಡಿಯನು ದಾನ ಮಾಡುತ್ತಾನೆ ಆಗಲೆಂದು ಪುಣ್ಯವಂತ!

16 ಫೆಬ್ರ 09
ಹುಂಡಿಯನು ತುಂಬುತ್ತಾರೆ ಜನ ಖುಷಿಯಾಗಲೆಂದು ಭಗವಂತ
ಅದನ್ನೇ ದಾನ ಮಾಡುತ್ತಾನೆ ಸಜ್ಜನ ತಾ ಆಗಲೆಂದು ಪುಣ್ಯವಂತ
 
ಬೆವರೇ ಸುರಿಸದೇ ತಾ ತುಂಬಿಕೊಳ್ಳುತಿರುವ ತನ್ನ ತಿಜೋರಿಯನು
ಅದರಲ್ಲತ್ಯಲ್ಪಂಶ ದಾನ ಮಾಡಿ ಪಡೆಯುತ್ತಾನೆ ಜನಮೆಚ್ಚುಗೆಯನು
 
ದೇವರ ಹೆಸರಿನಲ್ಲಿ ಪಡೆದು ಬಡ ಜನರಿಂದ ದಾನ ದೇಣಿಗೆಗಳನು
ತನ್ನ ಹೆಸರಿನಲಿ ಅದ ದಾನ ಮಾಡಿ ಪಡೆಯುತ್ತಾನೆ ಪ್ರಶಸ್ತಿಗಳನು
 
ಯಾವ ದೇವರಾದರೇನಂತೆ ನಮ್ಮ ತಿಜೋರಿ ತುಂಬಿಕೊಳ್ಳುವುದಕೆ
ಮನದೊಳಗೆ ಒಬ್ಬರಾದರೆ, ಇನ್ನೊಬ್ಬ ದೇವರು ತೋರಿಸಲೀ ಜಗಕೆ
 
ತಾನು ನಂಬಿದ ದೇವರು ಸಮಾಜದಿಂದಲೇ ದೂರವಾಗಿದ್ದರೇನಂತೆ
ಜನ ನಂಬುವ ದೇವರಿಂದ ತಿಜೋರಿಯ ತಾ ತುಂಬಿಕೊಳ್ಳಬಹುದಂತೆ
 
ಜನರನ್ನು ಭಯಭೀತರನ್ನಾಗಿಸಿ ತನ್ನತ್ತ ಸೆಳೆದುಕೊಳ್ಳಲು ಜಾಲ ಹರಡಿ
ನಿಶ್ಚಿಂತೆಯಿಂದ ಲೀಲಾಜಾಲವಾಗಿ ತಮ್ಮ ಜೀವನ ನಡೆಸುತ್ತಾರೆ ನೋಡಿ
******************************************

ಇಲ್ಲಾಂದ್ರೆ ರದ್ದಾಗಬಹುದು ನಮ್ಮ ಬ್ಲಾಗು!

13 ಫೆಬ್ರ 09
ನಮ್ಮ ಬೀದಿಯ ನಾಯಿಗಳು ನೀಡುತ್ತಿವೆ ನನಗೆ ಹೊಸ ಲುಕ್ಕು 
ಅವುಗಳ ತಲೆಗೇರಿದಂತಿದೆ ನಿನ್ನೆಯಿಂದ ಎನೋ ಒಂಥರಾ ಕಿಕ್ಕು 
 
ಕವಿತೆ ಪ್ರಕಟವಾದ ಬ್ರೇಕಿಂಗ್ ನಿವ್ಸ್ ಅವುಗಳಿಗೂ ತಲುಪಿದಂತಿದೆ 
ಅವುಗಳಿಗೆ ನನ್ನ ಮೇಲೀಗ ಕೆಂಡದಂತಹಾ ಕೋಪ ಬಂದಿರುವಂತಿದೆ 
 
ಯಾರು ಯಾರೋ ಬೀದಿ ಬೀದಿಗಳಲ್ಲಿ ನಾಳೆ ಆಡಿದರೆ ಜಗಳ 
ಆದೀತೆಂದಿದ್ದೆ ನಾನು ಖಂಡಿತಕ್ಕೂ ಅದು ಬರೀ ನಾಯಿ ಜಗಳ 
 
ತಪ್ಪಾಗಿದೆ ಅವುಗಳ ಕೋಮಿನ ಹೆಸರು ತೆಗೆದು ನಾನು ಹೋಲಿಸಿದ್ದು 
ಮಾನನಷ್ಟ ಮೊಕದ್ದಮೆ ಹೂಡಿ ಮಾಡಿಸಬಹುದು ನನ್ನೀ ಬ್ಲಾಗು ರದ್ದು 
 
ನಾವು ತುಂಬಾ ಯೋಚಿಸಬೇಕು ಏನಾದರೂ ಬರೆಯುವ ಮೊದಲು 
ಇಲ್ಲಾಂದ್ರೆ ರದ್ದಾಗಬಹುದು ನಮ್ಮ ಬ್ಲಾಗು ಪ್ರಕಟವಾಗುವ ಮೊದಲು

ಆದೀತು ಇದು ಬರೇ ನಾಯಿಗಳ ಜಗಳ!!!

13 ಫೆಬ್ರ 09

 

ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು 

ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು

 

ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು 

ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು? 

 

ನಿರುದ್ಯೋಗಿಗಳು ಈ ನಾಡಿನಲಿ ದಿನದಿನವೂ ಹೆಚ್ಚಲು 

ಈ ದೊಂಬರಾಟ ನಡೆಸುತ್ತಾರೆ ನಾಲ್ಕು ಜನ ಮೆಚ್ಚಲು 

 

ಹೊರ ಆತಂಕವಾದಿಗಳಿದಿರು ಯಾರೂ ಕಾದಾಡಲಾರರು 

ತಮ್ಮವರಿಗೆ ಕೀಟಲೆ ಕೊಟ್ಟು ತೀಟೆ ತೀರಿಸಿಕೊಳ್ಳುತಿಹರು 

 

ಎಲ್ಲರ ಮನದಲ್ಲೂ ನಾಯಕನಾಗುವ ಆಸೆ ತುಂಬಿಹುದು 

ಜನೋಪಕಾರಿ ಕಾರ್ಯ ಒಂದೂ ತಲೆಗೆ ಹೊಳೆಯದಿಹುದು 

 

ಸುಪ್ರಸಿದ್ಧನಾಗದಿದ್ದರೆ ಏನಂತೆ ಕುಪ್ರಸಿದ್ಧನಾಗಿಯಾದರೂ 

ಸುದ್ದಿಯಲ್ಲಿ ಇರಲೇಬೇಕು ಜನರಿಂದ ಬೈಸಿಕೊಂಡಾದರೂ 

 

ಪ್ರೀತಿ ಮಾಡುವವರಿಂದ ದೇಶಕ್ಕೆ ಇಲ್ಲ ಸ್ವಾಮೀ ತೊಂದರೆ 

ಆಮೇಲೆ ನೋಡೋಣ ಅವರಿಂದ ಸಮಾಜಕ್ಕೆ ಕಷ್ಟ ಬಂದರೆ 

 

ಉಗ್ರವಾದಿಗಳ ಸಾಹಸಕ್ಕೆ ಬನ್ನಿ ತಣ್ಣೀರೆರಚಿ ನೋಡೋಣ 

ಪರದೇಶೀ ಶಕ್ತಿಗಳ ಕುಮ್ಮಕ್ಕನ್ನು ಮುರಿದು ತೋರಿಸೋಣ 

 

ಲಂಚಕೋರರ ಹಿಡಿದು ಥಳಿಸುವವರು ಯಾರೂ ಇಲ್ಲಿಲ್ಲ 

ಕಳ್ಳ ಕದೀಮರ ಹಿಡಿದು ಸಮಾಜವನು ಕಾಯುವವರಿಲ್ಲ 

 

ರಾಜಕೀಯ ುಢಾರಿಗಳ ಹಿಡಿತದಿಂದ ದೇಶವನು ಬಿಡಿಸಿ 

ಭ್ರಷ್ಟಾಚಾರದ ಪಿಡುಗಿನಿಂದ ಈ ನಾಡನ್ನು ಒಮ್ಮೆ ರಕ್ಷಿಸಿ 

 

ನಮ್ಮ ನಮ್ಮ ನಡುವೆಯೇ ಯಾಕೆ ಸ್ವಾಮೀ ಈ ಬೀದಿ ಜಗಳ 

ಬೀದಿಯಲಿ ನಡೆದರೆ ಆದೀತು ಇದು ಬರೇ ನಾಯಿಗಳ ಜಗಳ!!!

*****************************************