ಸಖೀ,
ನನ್ನ ಹೆಚ್ಚಿನೆಲ್ಲಾ
ಕವನಗಳಲಿರುವ
ನಿನ್ನನ್ನು ಕಂಡು
ಸಹೃದಯಿ
ಓದುಗನೋರ್ವ
ಹೀಗಂದ:
“ಒಟ್ಟಾರೆಯಾಗಿ,
ಸಖಿಯೇ
ನಿಮಗೆ ಸಕಲ?”
ನಾನಂದೆ:
“ನಿಜಕೂ
ನನ್ನ ಸಖಿಯೇ
ನನಗೆ ಸಕಲ,
ಸಖಿಯೇ ಇಲ್ಲದಿರೆ
ನನ್ನ ಅಂಗಾಂಗಗಳು
ಆಗಲಾರವೇ ವಿಕಲ?”
ಸಖೀ,
ನನ್ನ ಹೆಚ್ಚಿನೆಲ್ಲಾ
ಕವನಗಳಲಿರುವ
ನಿನ್ನನ್ನು ಕಂಡು
ಸಹೃದಯಿ
ಓದುಗನೋರ್ವ
ಹೀಗಂದ:
“ಒಟ್ಟಾರೆಯಾಗಿ,
ಸಖಿಯೇ
ನಿಮಗೆ ಸಕಲ?”
ನಾನಂದೆ:
“ನಿಜಕೂ
ನನ್ನ ಸಖಿಯೇ
ನನಗೆ ಸಕಲ,
ಸಖಿಯೇ ಇಲ್ಲದಿರೆ
ನನ್ನ ಅಂಗಾಂಗಗಳು
ಆಗಲಾರವೇ ವಿಕಲ?”
26 Oct 09 at 12:36 pm
ಶ್ಯಾಮಲ,
ಈಕೆ ನನ್ನ ಕಾಲ್ಪನಿಕ ಸಖಿಯೋ ಅಥವಾ ವಾಸ್ತವಿಕ ಸಖಿಯೋ ಅನ್ನುವುದನ್ನು ಇಲ್ಲಿ ಓದಿ ತಿಳಿಯಿರಿ.
http://athradi.wordpress.com/2009/05/28/willnot/
ಕವಿಯ ಮಾತುಗಳು ಕಾನಿಕವೋ ಅಥವಾ ವಾಸ್ತವಿಕವೋ ಅನ್ನುವುದು ಓದುಗರಿಗೆ ಬಿಟ್ಟ ವಿಚಾರ ಎಂಬುದನ್ನೂ ಅರಿಯಿರಿ.:)
24 Oct 09 at 8:01 pm
ಸಖಿಯ ಸಖನಾದ ಸಕಲವ ಬಲ್ಲ ಸಕಲ ಕಲಾ ವಲ್ಲಭನೇ… ಈ ನಿಮ್ಮ ಸಖಿ ಕಾಲ್ಪನಿಕವೋ ಅಥವಾ ವಾಸ್ತವಿಕವೋ…..
ನೀ ಪೇಳು ಜನಮೇಜಯ………..
ಶ್ಯಾಮಲ
23 Oct 09 at 5:14 pm
ಒಟ್ಟಾರೆ ಈ ಸಾವಿರ ಗುಟ್ಟುಗಳನ್ನೆಲ್ಲಾ ಅರಿಯುವಷ್ಟರಲ್ಲಿ ನಾವು ಮುದುಕರಾಗಿ ಬಿಡುವುದಂತೂ ನಿಜ
ಆದರೆ ಸಂಸಾರದಲ್ಲಿ ಸುಖ ಅನುಭವಿಸಿರುತ್ತೇವೋ ಇಲ್ಲವೋ ಅನ್ನುವುದರಲ್ಲಿ ಇದೆ ಸಂಶಯ ಸಹಜ
23 Oct 09 at 5:09 pm
ಒಟ್ಟಿನಲ್ಲಿ ಸುಖ ಸಂಸಾರದ ಸಾವಿರಾರು ಗುಟ್ಟುಗಳಲ್ಲಿ ಇದು ಅತೀ ಮುಖ್ಯವಾದದ್ದು ಎನ್ನಿ…
23 Oct 09 at 5:05 pm
ಸಂದೀಪ್ ಶೆಟ್ರೇ,
ಸಖನಾದವನು ಆಗಿರಲೇಬೇಕು ಸಖಿಯ ಸಕಲವ ಬಲ್ಲ ಸಕಲ ಕಲಾ ವಲ್ಲಭ
ಇಲ್ಲದಿರೆ ಆತನ ಬಾಳಿನಲ್ಲಿ ಸುಖ ಅನ್ನುವುದು ಆಗಬಹುದು ಕಣ್ರೀ ದುರ್ಲಭ
23 Oct 09 at 5:03 pm
ನಿಮ್ಮನ್ನು ಪಡೆದ ನಿಮ್ಮ ಸಖಿ ಪುಣ್ಯವಂತೆ
ಹಾಗೂ
ನೀವು ಸಖಿಯ ಸಕಲವ ಬಲ್ಲ ಸಕಲ ಕಲಾವಲ್ಲಭ