ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ
ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ
ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ
ಅಮ್ಮನನ್ನು “ಮಮ್ಮಿ” ಎಂಬ ಕಂದಮ್ಮಗಳ ಬಾಯಲ್ಲಿ
ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ “ಅಂಕಲ್” ಎಂಬವರಲ್ಲಿ
ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ “ಅಂಕಲ್” ಎಂಬವರಲ್ಲಿ
“ರೋಡ”ಲ್ಲಿ ನಡೆದು “ಸರ್ಕಲ್ಲ”ನ್ನು ಸುತ್ತಿ “ಸ್ಕೂಲಿ”ಗೆ ಹೋಗಿ
ಕಲಿತ ನಾಲ್ಕಕ್ಷರಗಳು ಕಂಡಿವೆ ಕನ್ನಡಕ್ಕಿಂತಲೂ ಹೆಚ್ಚಾಗಿ
ಕಲಿತ ನಾಲ್ಕಕ್ಷರಗಳು ಕಂಡಿವೆ ಕನ್ನಡಕ್ಕಿಂತಲೂ ಹೆಚ್ಚಾಗಿ
ಆಡು ಭಾಷೆಯ ಸೋಗಿನಲಿ ಆಂಗ್ಲ ಹಾಸುಹೊಕ್ಕಾಗಿಹುದು
ಅಲ್ಲಿಂದ ಬರಹಕ್ಕೆ ಬಂದು ಕನ್ನಡವನೇ ಈಗ ಓಡಿಸಿಹುದು
ಅಲ್ಲಿಂದ ಬರಹಕ್ಕೆ ಬಂದು ಕನ್ನಡವನೇ ಈಗ ಓಡಿಸಿಹುದು
ಅಶ್ಟು ಇಶ್ಟು ಎಶ್ಟು ಎಂಬ ಭಾಶೆಯನು ಬಳಸಿ ಹಳೆಯದಿರಲಿ
ಎಂಬುವವರು ಚಡ್ಡಿಗಳ ಬಿಟ್ಟಿನ್ನು ಲಂಗೋಟಿಯನೇ ತೊಡಲಿ
ಎಂಬುವವರು ಚಡ್ಡಿಗಳ ಬಿಟ್ಟಿನ್ನು ಲಂಗೋಟಿಯನೇ ತೊಡಲಿ
ದೊಡ್ಡ ತಾರಾ ಉಪಾಹಾರ ವಸತಿ ಗೃಹಗಳಲಿ ಕನ್ನಡವಿಲ್ಲ
ಪಾಪದ ಕಾಕಾ ತನ್ನ ತಿಂಡಿಯ ಸ್ವಭಾಷೆಯಲಿ ಕರೆಬಹುದಲ್ಲ
ಪಾಪದ ಕಾಕಾ ತನ್ನ ತಿಂಡಿಯ ಸ್ವಭಾಷೆಯಲಿ ಕರೆಬಹುದಲ್ಲ
ತಿಂಡಿಯ ನಾಮಕರಣ ಮಾಲೀಕನಲ್ಲದೆ ನಾ ಮಾಡಬಹುದೇ
ಕುಮಾರನನು ಗುಮಾರನೆಂದರೆ ಬರಿದೆ ಉರಿದಾಡಬಹುದೆ
ಕುಮಾರನನು ಗುಮಾರನೆಂದರೆ ಬರಿದೆ ಉರಿದಾಡಬಹುದೆ
ಅನ್ಯರು ಅಲ್ಲಿ ಬಳಸಿದ ಭಾಷೆ ಯಾವುದೆನ್ನುವುದಷ್ಟೇ ಮುಖ್ಯ
ಕನ್ನಡ ನಾಡಲ್ಲಿ ಕನ್ನಡದ ಫಲಕಗಳು ಇರುವುದು ಪ್ರಾಮುಖ್ಯ
ಕನ್ನಡ ನಾಡಲ್ಲಿ ಕನ್ನಡದ ಫಲಕಗಳು ಇರುವುದು ಪ್ರಾಮುಖ್ಯ
ಅನ್ಯ ಭಾಷಿಗರ ಪರ ಮಾತಾಡಲೆನ್ನ ನಿರಭಿಮಾನಿ ಎಂಬರು
ಕನ್ನಡದ ಬಳಕೆ ಮಾಡದಲೇ “ಐ ಲವ್ ಕನ್ನಡ” ಎಂದೆಂಬರು
ಕನ್ನಡದ ಬಳಕೆ ಮಾಡದಲೇ “ಐ ಲವ್ ಕನ್ನಡ” ಎಂದೆಂಬರು
ಹುಟ್ಟು ಕನ್ನಡಿಗ ಅಚ್ಚ ಕನ್ನಡಿಗರೆಂದು ತಮ್ಮ ಬೆನ್ನ ತಟ್ಟಿಕೊಂಬರು
ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದಲೇ ಬರೆಯುವವರ ಜರೆಯುವರು
ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದಲೇ ಬರೆಯುವವರ ಜರೆಯುವರು
ಕನ್ನಡದ ಹೆಸರಲ್ಲಿ ಹಗಲೆಲ್ಲಾ ನಾಡಲ್ಲಿ ವಸೂಲಿ ನಡೆಯುತಿಹುದು
ಕನ್ನಡ ಉಳಿಯದಿದ್ದರೂ ಅವರ ತಿಜೋರಿಗಳು ತುಂಬುತಿಹುದು
ಕನ್ನಡ ಉಳಿಯದಿದ್ದರೂ ಅವರ ತಿಜೋರಿಗಳು ತುಂಬುತಿಹುದು
ಸಾಹಿತಿಗಳ ಚಿಕ್ಕ ಚಿತ್ರಗಳ ಜೊತೆಗೆ ನಾಯಕರ ದೊಡ್ಡ ಭಾವಚಿತ್ರ
ಕನ್ನಡಕ್ಕಿಂತಲೂ ಈ ನಾಯಕರ ಪ್ರಚಾರವೇ ನಡೆದಿದೆ ಸರ್ವತ್ರ
ಕನ್ನಡಕ್ಕಿಂತಲೂ ಈ ನಾಯಕರ ಪ್ರಚಾರವೇ ನಡೆದಿದೆ ಸರ್ವತ್ರ
06 Jul 09 at 7:55 pm
ಹೆಗ್ಡೆ ಅವರು ನನ್ನ ಕ್ಷಮಿಸಬೇಕು! ಅಸಹ್ಯ ಪಡೋ ಅಂತದ್ದು ಏನೂ ಹೇಳಿಲ್ಲ ಸ್ವಾಮಿ. ಸದ್ಯಕ್ಕೆ ಇರೋದು ನ್ಯೂಯಾರ್ಕ್ ನಲ್ಲೆ ಸ್ವಾಮಿ! ಮನಸೆಲ್ಲ ಇರೊದು ಬೆಂಗಳೂರಲ್ಲೇ! ಏನು ಮಾಡೋದು, ಹೊಟ್ಟೆಪಾಡು ಇಲ್ಲಿಯ ತನಕ ಎಳೆದುಕೊಂಡು ಬಂದಿದೆ. ಇಂಟರ್ ನೆಟ್ ನಲ್ಲಿ ಕೆಲವು ಕಡೆ ಬೆಂಗಳೂರು/ಮೈಸೂರು, ಮತ್ತೆ ಕೆಲವು ಕಡೆ ನ್ಯೂಯಾರ್ಕ್ ಅಂತ ಹಾಕುತೀನಿ ಅಷ್ಟೆ! “ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಅನ್ನುವುದು ನನ್ನ policy! ನಿಮ್ಮ ಆಸುಮನದ ಮಾತು ನಿಲ್ಲಿಸಿ ಅಂತ ನಾನು ಹೇಳಲಿಲ್ಲ ರೀ, ಖಂಡಿತವಾಗಿಯೂ ಮುಂದುವರಿಯಲಿ. ಪುರುಸೊತ್ತಾದಾಗೆಲ್ಲ ಬಂದು ಓದುವೆ…
06 Jul 09 at 10:14 am
ಕನ್ನಡ ಪ್ರೇಮಿ ಪ್ರದೀಪ,
ನೀವು ಏನು ಅನ್ನುವುದನ್ನು ನಿಮ್ಮ ಬರಹ ಹೇಳಲಿ. ನೀವೇ ಹೇಳಿಕೊಂಡರೆ ಚೆನ್ನಾಗಿರದು.
ನನ್ನ ಬಗ್ಗೆ ನಾನು ಹೇಳಿಕೊಂಡರೂ ಚೆನ್ನಾಗಿರದು. ನನ್ನ ಬರಹಗಳೇ ಹೇಳಲಿ.
ನನ್ನನ್ನು ದೂರುವವರ ಮೇಲೆ ಹೇಗೆ ನನ್ನ ಹಿಡಿತ ಇಲ್ಲವೋ ಹಾಗೆಯೇ ನನ್ನ ಬರಹಗಳನ್ನು ಮೆಚ್ಚುವವರ ಮೇಲೂ ಇಲ್ಲ. ಅವರಿಗೆ ಹೊಗಳು ಭಟ್ಟರು, ಭಟ್ಟಂಗಿಗಳು ಅನ್ನುವ ಪದ ಪ್ರಯೋಗ ಮಾಡುವುದರಿಂದ ನಿಮ್ಮ ಶಬ್ದ ಭಂಡಾರದ ಮತ್ತು ಯೋಚನಾಲಹರಿಯ ಪರಿಚಯ ಜನರಿಗೆ ಆಗುತ್ತದೆ, ಅಷ್ಟೆ. ನನ್ನ ಹೆಂಡತಿಯನ್ನು ಹೊಗಳಲು ಪಕ್ಕದ ಮನೆಯವನ ಹೆಂಡತಿಯನ್ನು ದೂರಿದರೆ ಅಥವಾ ಪಕ್ಕದ ಮನೆಯಾಕೆಯನ್ನು ಹೊಗಳಲು ನನ್ನ ಹೆಂಡತಿಯನ್ನೇ ದೂರಿದರೆ, ಏನು ಸಾಧಿಸಿದಂತಾಗುತ್ತದೆ? ಸುಮ್ಮನೆ ಮಾನಸಿಕ ನೆಮ್ಮದಿ ನಷ್ಟ ಅಷ್ಟೆ.
ನನ್ನ ಕನ್ನಡ ಅನುಭವ, ಕನ್ನಡ ಪ್ರೇಮ ಇದರ ಬಗ್ಗೆ ನಾನು ಯಾರೊಂದಿಗೂ ಪೈಪೋಟಿ ಮಾಡುವುದಿಲ್ಲ. ಯಾರಿಗೆ ಹೆಚ್ಚು ಯಾರಿಗೆ ಕಡಿಮೆ ಅನ್ನುವ ಮಾತೂ ಬೇಕಾಗಿಲ್ಲ ನನಗೆ.
ಡಾ. ಆಜಾದ್ ಹೇಳಿದಂತೆ ಇಲ್ಲಿ ಆಸುಮನದ ಮಾತು ಮುಂದುವರಿಯುತ್ತದೆ. ಓದುವವರು ಓದಲಿ. ಓದದವರು ಓದದಿರಲಿ. ಅಷ್ಟೆ. ನನಗೆ ಸಂತಸ ನೀಡುವ ಸಂಗತಿ ಎಂದರೆ, ನೀವು ನನ್ನ ಎಲ್ಲಾ ಬರಹಗಳನ್ನೂ ಚಾಚೂ ತಪ್ಪದೆ ಓದುತ್ತಿರುವುದು.
ನೀವು ಸಂಪದದ “ಪ್ರೊಫೈಲಿನಲ್ಲಿ” ನಿಮ್ಮ ಊರು ನ್ಯೂಯಾರ್ಕ್ ಅಂತ ಹೇಳಿಕೊಂಡಿರುವುದು ಅಸಹ್ಯ ಅನಿಸಿತು.
ಹಾಯ್ ಬೇಂಗಳೂರಿನಲ್ಲಿ ಇದ್ದೇನೆ ಅನ್ನುವವರು ಈ ರೀತಿ ಸುಳ್ಳು ಹೇಳಬಹುದೇ?
ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗಳಿಗೆ ಮತ್ತು ನನ್ನ ಬರಹದ ಬಗ್ಗೆ ಈ ರೀತಿ ಪ್ರಚಾರ ಮಾಡುತ್ತಿರುವುದಕ್ಕೆ.
04 Jul 09 at 1:19 am
ಸುರೇಶ್ ಸರ್,
ಮಾತು, ಅನಿಸಿಕೆ ಭಾವನೆಯ ಪ್ರಕಟಗೊಳ್ಳುವಲ್ಲಿ ಇತರರಿಗೆ ನೋವಾಗದಂತೆ ನೋವಾಗದಂತೆ ನೋಡಿಕೊಂಡರೆ ಸಾಕು…ನಾನಿದ್ದೇನೆ ಅಂತ ಹೇಳಿಕೊಳ್ಳದಿದ್ದರೆ ಕುರುಡಾಗಿರುವ ದಾರಿಗ ತುಳಿದು ಮುನ್ನಡೆಯೋದು ಸಹಜ..ಆಗ ನೋವು ಅಂದರೆ ಈಗ ಮೂಗು ಮುರಿಯುವವರೇ..ಹೇಳೋಕೇನು ಧಾಡಿ ಅವನಿಗೆ ಕಾಣುತ್ತಾ..ಅಂತ ನಿಮಗೇ ತಿರುಗಿ ಹೇಳಬಹುದು…ನಮ್ಮ ಅಸ್ತಿತ್ವಾನ ನಾವೇ ಕಾಪಾಡ್ಕೋಬೇಕಾದ ಕಾಲದಲ್ಲಿ…ನಮ್ಮ ಬಗ್ಗೆ ನಾವೇ ಹೇಳ್ಕೋಬೇಕಾದ ಅನಿವಾರ್ಯತೆ ನಮ್ಮದಾಗಿದೆ…ಮನದ ಮಾತು..ಮುಂದುವರೆಯಲಿ…
03 Jul 09 at 11:15 pm
ರೀ..ಹೆಗ್ಡೆಯವರೆ, ಈ ಕನ್ನಡ ಪ್ರೇಮಿ ಬೇರೆ ಯಾರು ಅಲ್ಲ.ನಿಮ್ಮ ಬಹೊಪರಾಕ್ ಗುಂಪಿಗೆ ಸೇರದ ಪ್ರದೀಪ. ನನ್ನಂತಹ ವ್ಯಂಗ್ಯ ಮತ್ತು ಖಾರದ ಪ್ರತಿಕ್ರಿಯೆಗಳು ನಿಮ್ಮ ಸಂಪದ ಸಮುದಾಯಕ್ಕೆ ಸಹ್ಯವಾಗೊಲ್ಲ ಅನ್ಸುತ್ತೆ. ನಿಮ್ಮ “ಯಾಕೆ ಸುಳ್ಳು ಹೇಳಿದಿರಮ್ಮಾ…?” ಎಂಬುದಕ್ಕೆ ನಾನು ನೀಡಿದ ವಿಮರ್ಶೆಗಳನ್ನು ನಿಮ್ಮ ಯಾರೊ ಭಟ್ಟ್ಂಗಿ ಫ಼್ಲಾಗ್ ಮಾಡಿದ ಅಂತ ಅಳಿಸಿ ನನ್ನನ್ನು ಹೊರಹಾಕಿದಾರೆ. .ಇಲ್ಲದಿದ್ದರೆ ನನ್ನನ್ನು ಗುರಿಯಾಗಿಸಿಕೊಂಡು ನೀಡಿದ ಪ್ರತಿಕ್ರಿಯೆಗಳಿಗೆ ಪ್ರತಿಯಾಗಿ ನನ್ನ ಪ್ರತಿಕ್ರಿಯೆಗಳನ್ನು ಸರಿಯಾಗಿ ನೀಡುತ್ತಿದ್ದೆ. ಅದನ್ನು ಇಲ್ಲಿ ನಿಮ್ಮ ಬ್ಲಾಗ್ ನಲ್ಲಿ ಹಾಕಿ. ನನ್ನ ವಿಮರ್ಶೆ ಕೊಡುತ್ತೇನೆ. ನಾನೇನು ನಿಮ್ಮ ಬಗ್ಗೆ ಅಸಭ್ಯ ಭಾಷೆ ಪ್ರಯೋಗಿಸಿದ್ದನೆ? ಅದಕ್ಕೆ ನನ್ನ ಖಾರವಾದ ಪ್ರಿತಿಕ್ರಿಯೆ ಕೂಡ ಈ ನಿಮ್ಮ ಸಂಪದದ ಜನಕರಾದ ನಾಡಿಗ್ ಅವರಿಗೆ ಕಳುಹಿಸಿದ್ದೇನೆ. ನಿಮ್ಮಂತೆ ನಿಮ್ಮ ಸ್ನೇಹಿತರೆಲ್ಲರೂ ಜಾಣ ಕುರುಡರು ಅನ್ಸುತ್ತೆ. ಯಾವ ಪ್ರತಿಕ್ರಿಯೆ ಕೂಡ ಕೊಡಲ್ಲ. ನಿಮಗಿಂತ ವಯಸ್ಸಿನ್ನಲ್ಲಿ ನಾನು ಎರಡು ಪಟ್ಟು ಚಿಕ್ಕವ. ಆದರೆ ಯೋಚನಾಶಕ್ತಿಯಲ್ಲಿ ನಿಮಗೆ ಸರಿಸಾಟಿ. ನಿಮ್ಮಷ್ಟು ಕನ್ನಡ ಪಾಂಡಿತ್ಯ ನನ್ನಲ್ಲಿ ಇರದೆ ಇರಬಹುದು. ಆದರೆ ಕನ್ನಡದ ಬಗ್ಗೆ ಅಪ್ರತಿಮ ಸ್ವಾಭಿಮಾನ ಉಳ್ಳವನು. ನಿಮ್ಮ ಈ ಭಟ್ಟಂಗಿಗಳ ಕನ್ನಡಕ್ಕಿಂತಲೂ ನನ್ನ ಕನ್ನಡ ಸಾವಿರ ಪಾಲು ಉತ್ತಮ. ನಾನೇನು ನಿಮ್ಮ ಹಾಗೆ ಬರೆದಿದ್ದನ್ನೆಲ್ಲ ಬ್ಲಾಗ್ ನಲ್ಲಿ ಹಾಕಿ ಬಹೊಪರಾಕ್ ಹಾಕಿಸಿಕೊಂಡು ಉಬ್ಬಿ ಬೀಗುವ ಗುಂಪಿಗೆ ಸೇರಿದವನಲ್ಲ. ಆದರೆ ನನ್ನ ಸ್ವಂತ ಬರವಣಿಗೆ ಏನಿದೆ ಅನ್ನೊ ನಿಮ್ಮ ಕೊಂಕು ನುಡಿಗಳಿಗೆ ಪ್ರತಿಯಾಗಿ ನನ್ನ ಬ್ಲಾಗ್ನಲ್ಲಿ ಕೆಲವನ್ನು ಹಾಕಿದ್ದೇನೆ. ನೋಡಿ. ನೀವು ಹೀಗೆ ಬರೀ ಬ್ಲಾಗ್ ನಲ್ಲಿ ಕನ್ನಡಕ್ಕೆ ಹೋರಾಡಿ ಮಡಿದು ಧನ್ಯರಾಗಬೇಕೆಂಬ ನಿಮ್ಮ ಆಶಯಕ್ಕೆ ನಾನೇಕೆ ಅಡ್ಡಗಾಲು ಹಾಕಲಿ..
03 Jul 09 at 9:51 am
ಕನ್ನಡ ಪ್ರೇಮಿ,
ವಾಸ್ತವಕ್ಕೆ ಕನ್ನಡಿ ಹಿಡಿಯುವ ಅಭ್ಯಾಸ ನನ್ನದು. ಅದು ೩೨ ವರುಷಗಳಷ್ಟು ಹಳೆಯದು ಕೂಡ. ನಿಮ್ಮ ಕಾಳಜಿ ಅರ್ಥ ಆಗಿದೆ. ಆದರೆ ನನ್ನ ಮಾತಿನ ಹಿಂದಡಗಿರುವ ಅಳಲು ನಿಮಗರ್ಥ ಆದಂತಿಲ್ಲ. ಆದರೆ ನಿಮ್ಮನ್ನು ನಾನು ದೂರುವುದಿಲ್ಲ. ನನ್ನನ್ನು ಕನ್ನಡಿಗನೇ ಅಲ್ಲ, ಎಂದು ಜರೆದಾಗ ಮನದೊಳಗಿಂದ ಬಂದ ಮಾತುಗಳಿವು. ಏಕೆಂದರೆ ನಾನು ಬೇರೆಯೇ ಒಂದು ಆಡು ಭಾಷೆಯನ್ನು ಆಡುವ ಪ್ರದೇಶದಲ್ಲಿ (ಉಡಿಪಿ) ಹುಟ್ಟಿದವನು. ಅಲ್ಲಿನ ಆಡು ಭಾಷೆಯನ್ನು ನನ್ನ ಮಾತೃಭಾಷೆಯಲ್ಲದಿದ್ದರೂ ಕಲಿತು ಆಡುತ್ತೇನಾದರೆ, ನಾನು ನನ್ನ ಮಾತೃಭಾಷೆಗೆ ಯಾವುದೇ ಅಪಮಾನ ಮಾಡುತ್ತಿಲ್ಲ. ಬರಹಕ್ಕೆ ನಾನು ಆರಿಸಿಕೊಂಡಿರುವುದು, ನನ್ನ ಮನದ ಮಾತುಗಳನ್ನು ನಿಮ್ಮ ಮುಂದಿಡಲು ಹೆಚ್ಚಾಗಿ ಆರಿಸಿಕೊಂಡಿರುವುದು ಕನ್ನಡವನ್ನೇ. ಆದರೆ, ಇನ್ನೊಬ್ಬರಿಂದ ಮೂದಲಿಸಿಕೊಂಡಾಗ ಮನ ಮರುಗಿ ಹೊರ ಹೊಮ್ಮಿಸಿದ ಮಾತುಗಳಿವು. ಇದು ನನ್ನ ಅಳಲು. ಕನ್ನಡಿಗರೆಲ್ಲರ ಅಳಲಾಗಬೇಕು. ವಾಸ್ತವದ ಅರಿವಾಗಬೇಕು. ಅಷ್ಟೇ ನನ್ನ ಆಶಯ. ಕನ್ನಡಕ್ಕಾಗಿ ಮಡಿದರೆ, ನನ್ನ ಜೀವನ ಧನ್ಯ. ನಿಮಗೆ ಧನ್ಯವಾದಗಳು.
03 Jul 09 at 3:33 am
ಇಂಥ ಕವನ ನಿಮ್ಮಂಥ ತಿಳಿದವರಿಂದ ಬೇಕಿತ್ತೆ? ನಿಮ್ಮಂತವರು ಇತರರಿಗೆ ಮಾದರಿಯಾಗಬೇಕು.ಆದರೆ ಈ ರೀತಿಯಲ್ಲ.ಕಟ್ಟಿಕೊಂಡ ಗಂಡ ಹೆಂಡತಿಗೆ ರಂಡೆ ಅಂದರೆ ನಾಳೆ ರಸ್ತೆ ಮೇಲೆ ಹೋಗುವವನು ರಂಡೆ ಅಂತ ಕರೀತಾನೆ ಅಲ್ವೆ?